12ನೇ ತರಗತಿ ನಂತರ ಕ್ಯಾಬಿನ್ ಸಿಬ್ಬಂದಿ (Air Hostess/Flight Attendant) ಆಗುವುದು ಹೇಗೆ?

ವಿಮಾನಯಾನದಲ್ಲಿ 12ನೇ ತರಗತಿ ನಂತರ ಕ್ಯಾಬಿನ್ ಸಿಬ್ಬಂದಿಯಾಗಲು ಆಸಕ್ತಿ ಇರುವವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ವಿಮಾನಯಾನ ಕ್ಷೇತ್ರವು ಹಲವಾರು ಆಕರ್ಷಕ ವೃತ್ತಿ ಅವಕಾಶಗಳನ್ನು ಒದಗಿಸುತ್ತದೆ, ಅದರಲ್ಲಿ ಕ್ಯಾಬಿನ್ ಸಿಬ್ಬಂದಿ ಪಾತ್ರವು (Air Hostess/Flight Attendant) ತುಂಬಾ ಮುಖ್ಯವಾದದ್ದು. ಇದು ಪ್ರಯಾಣಿಕರಿಗೆ ಮಾತ್ರ ಸೇವೆ ನೀಡೋದಲ್ಲ, ಅವರ ಸುರಕ್ಷತೆ ಮತ್ತು ಆರಾಮವನ್ನು ಖಾತರಿಪಡಿಸುವ ಜವಾಬ್ದಾರಿಯುತ ಕೆಲಸವಾಗಿದೆ. 12ನೇ ತರಗತಿ ಪೂರ್ಣಗೊಳಿಸಿದ ನಂತರ ನೀವು ಈ ಉದ್ಯೋಗವನ್ನೇ ಆಯ್ಕೆ ಮಾಡಿದರೆ ಈ ಲೇಖನದಲ್ಲಿದೆ ಸಂಪೂರ್ಣ ಮಾಹಿತಿ.
ಕ್ಯಾಬಿನ್ ಸಿಬ್ಬಂದಿ (Cabin Crew) ಅಂದ್ರೆ ಯಾರು? ಅವರಿಗೆ ಇರುವಂತಹ ಜವಾಬ್ದಾರಿಗಳೇನು?
ಕ್ಯಾಬಿನ್ ಸಿಬ್ಬಂದಿಗಳು ವಿಮಾನದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ನೆಮ್ಮದಿಯನ್ನು ಖಾತರಿಪಡಿಸುವ ಪರಿಣತರು ಹಾಗೆ ಇದು ಅವರ ಮುಖ್ಯ ಜವಾಬ್ದಾರಿಗಳಾಗಿವೆ.
ವಿಮಾನದಲ್ಲಿ ಬಂದಂತಹ ಪ್ರಯಾಣಿಕರನ್ನು ಸ್ವಾಗತಿಸುವುದು ಅವರಿಗೆ ಸರಿಯಾದ ಆಸನವನ್ನು ಗುರುತಿಸಿ ಹೇಳುವುದು, ಸುರಕ್ಷತಾ ಕ್ರಮಗಳನ್ನು ನೀಡುವುದು ಅಲ್ಲದೆ ತುರ್ತು ಸಂಧರ್ಭಗಳಲ್ಲಿ ಸಹಾಯ ಮಾಡುವುದು, ತಿನ್ನಲು ಮತ್ತು ಕುಡಿಯಲು ವಿತರಿಸುವುದು ಹಾಗೆ ಪ್ರಯಾಣಿಕರು ಕೇಳುವಂತಹ ಪ್ರಶ್ನೆಗಳಿಗೆ ಉತ್ತರಿಸಿ ಅವರ ಸಮಸ್ಯೆಗಳನ್ನು ಪರಿಹರಿಸುವುದು. ವಿಮಾನದಲ್ಲಿ ಸ್ವಚ್ಛತೆ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ನಿರ್ವಹಣೆ ಮಾಡುವುದು ಗಗನಸಖಿಗಳ ಕೆಲಸವಾಗಿರುತ್ತದೆ.
ಅರ್ಹತಾ ಮಾನದಂಡಗಳು (Eligibility Criteria)
ಸಾಮಾನ್ಯವಾಗಿ 12ನೇ ತರಗತಿ ನಂತರ ಕ್ಯಾಬಿನ್ ಸಿಬ್ಬಂದಿಯಾಗಲು ಅವಕಾಶವಿರುತ್ತದೆ, ಮತ್ತು ಮಾನ್ಯತೆ ಪಡೆದ ಬೋರ್ಡ್‌ನಿಂದ ಕನಿಷ್ಠ 10+2 ಪೂರೈಸಿರಬೇಕು. ಯಾವುದೇ ಸ್ಟ್ರೀಮ್ ನಲ್ಲಾದರೂ (ಕಲಾ, ವಾಣಿಜ್ಯ, ವಿಜ್ಞಾನ) ಆಗಿರಬಹುದು.
ವಯಸ್ಸಿನ ಮಿತಿ ನೋಡೋದಾದ್ರೆ ಸಾಮಾನ್ಯವಾಗಿ 18 ರಿಂದ 27 ವರ್ಷಗಳು ಇರಬೇಕು ಆದಾಗಿಯೂ ಕೆಲವು ಏರ್‌ಲೈನ್‌ಗಳು 32 ವರ್ಷದವರೆಗೂ ಅವಕಾಶ ನೀಡುತ್ತವೆ.
ದೈಹಿಕ ಅರ್ಹತೆ:
ಮಹಿಳೆಯರು ಕನಿಷ್ಠ 155 cm ಎತ್ತರ (Height) (5 ಅಡಿ 2 ಇಂಚು) ಇರಬೇಕು ಮತ್ತು ಪುರುಷರು ಕನಿಷ್ಠ 170 cm (5 ಅಡಿ 7 ಇಂಚು) ಎತ್ತರ ಹೊಂದಿರಬೇಕು. ಹಾಗೆ ಎತ್ತರಕ್ಕೆ ಅನುಗುಣವಾಗಿ ತೂಕವಿರಬೇಕು (BMI - Body Mass Index).
ವಿಮಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಖಂಡಿತವಾಗಲೂ ಉತ್ತಮ ದೃಷ್ಟಿ ಹೊಂದಿರಬೇಕು. ಕನ್ನಡಕ ಹಾಕುವವರಿಗೆ ನಿರ್ಬಂಧ ಇರುವುದಿಲ್ಲ, ಆದರೆ ಕೆಲವು ಏರ್‌ಲೈನ್‌ಗಳು ಒಂದು ನಿರ್ದಿಷ್ಟ ಸಂಖ್ಯೆಯ ಡಯಾಪ್ಟರ್‌ಗಳಿಗಿಂತ ಹೆಚ್ಚು ಇರಬಾರದು ಎಂದು ಹೇಳಬಹುದು ಅದಲ್ಲದೆ ಕಾಂಟ್ಯಾಕ್ಟ್ ಲೆನ್ಸ್‌ಗಳಿಗೆ ಸಾಮಾನ್ಯವಾಗಿ ಅನುಮತಿ ಇದೆ. ಇದರೊಟ್ಟಿಗೆ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿರಬೇಕು, ಜೊತೆಗೆ ಸ್ಪಷ್ಟವಾದ ಮತ್ತು ಆರೋಗ್ಯಕರ ಚರ್ಮ ಕೂಡ ಇಲ್ಲಿ ಮುಖ್ಯ, ಸಾಮಾನ್ಯವಾಗಿ ಕೆಲವು ಏರ್‌ಲೈನ್‌ಗಳು ಹಚ್ಚೆಗಳಿಗೆ (Tattoos) ಅವಕಾಶ ನೀಡುವುದಿಲ್ಲ.
ಭಾಷಾ ಕೌಶಲ್ಯ ಅಂತ ಬಂದಾಗ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಉತ್ತಮ ಕಮ್ಯೂನಿಕೇಷನ್ ಹೊಂದಿರಬೇಕು, ಒಂದು ವೇಳೆ ನಿಮಗೆ ಹೆಚ್ಚು ವಿದೇಶಿ ಭಾಷೆಗಳ ಜ್ಞಾನವಿದ್ದರೆ ಅದು ಇನ್ನೂ ಅನುಕೂಲಕರ. ಅದರಲ್ಲೂ ಮುಖ್ಯವಾಗಿ ಸ್ನೇಹಪರ, ತಾಳ್ಮೆ, ಸಕಾರಾತ್ಮಕ ಮನೋಭಾವ ಮತ್ತು ಒತ್ತಡದ ಸಂದರ್ಭಗಳನ್ನು ನಿರ್ವಹಿಸುವ ಚಾಕಚಕ್ಯತೆ ಇರಬೇಕು.
12ನೇ ತರಗತಿ ನಂತರ ನೀವು ನೇರವಾಗಿ ಏರ್‌ಲೈನ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು
ಕ್ಯಾಬಿನ್ ಸಿಬ್ಬಂದಿ, ಏರ್‌ಲೈನ್ ಮತ್ತು ಹಾಸ್ಪಿಟಾಲಿಟಿ ನಿರ್ವಹಣೆ, ಏವಿಯೇಷನ್, ಟ್ರಾವೆಲ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ವಿವಿಧ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳು ಲಭ್ಯವಿವೆ. ಇವು ಸಾಮಾನ್ಯವಾಗಿ 6 ತಿಂಗಳಿಂದ 1 ವರ್ಷದ ಅವಧಿಯದ್ದಾಗಿರುತ್ತವೆ. ಇವುಗಳಿಂದ ತರಬೇತಿ ಕೋರ್ಸ್‌ಗಳನ್ನು ಮಾಡಿ ಇನ್ನಷ್ಟು ತಯಾರಾಗಿ ಹೋಗಬಹುದು.
ಕ್ಯಾಬಿನ್ ಸಿಬ್ಬಂದಿ ಕ್ಷೇತ್ರದ ನೇಮಕಾತಿ ಪ್ರಕ್ರಿಯೆಯು ಸಾಮಾನ್ಯವಾಗಿ ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:
ಏರ್‌ಲೈನ್ ವೆಬ್‌ಸೈಟ್‌ಗಳ ಮೂಲಕ ಅರ್ಜಿ ಸಲ್ಲಿಸುವುದು ಅಥವಾ ವಾಕ್-ಇನ್ ಇಂಟರ್‌ವ್ಯೂಗಳಿಗೆ ಹಾಜರಾಗುವುದು. ಅಭ್ಯರ್ಥಿಗಳ ಸಂವಹನ ಕೌಶಲ್ಯಗಳು, ನಾಯಕತ್ವ ಗುಣಗಳು ಮತ್ತು ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಪರೀಕ್ಷೆ ಮಾಡಲು ಗುಂಪು ಚರ್ಚೆ (Group Discussion - GD) ನಡೆಸಲಾಗುತ್ತದೆ.
ಅಲ್ಲದೆ ಅಭ್ಯರ್ಥಿಯ ವ್ಯಕ್ತಿತ್ವ, ಆತ್ಮವಿಶ್ವಾಸ, ಗ್ರಾಹಕ ಸೇವಾ ಮನೋಭಾವ ಮತ್ತು ವೃತ್ತಿಯ ಬಗ್ಗೆ ಆಸಕ್ತಿಯನ್ನು ವೈಯಕ್ತಿಕ ಸಂದರ್ಶನ (Personal Interview - PI) ತಿಳಿದುಕೊಳ್ಳಲಾಗುತ್ತದೆ.
ದೈಹಿಕ ತಪಾಸಣೆ (Medical Check-up) ಯಲ್ಲಿ ಕಣ್ಣು, ಕಿವಿ, ರಕ್ತ ಪರೀಕ್ಷೆಗಳು ಸೇರಿದಂತೆ ಸಂಪೂರ್ಣವಾಗಿ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ಅಭ್ಯರ್ಥಿಯ ಹಿಂದಿನ ದಾಖಲೆಗಳನ್ನು ಕೂಡ ಪರಿಶೀಲನೆ ಮಾಡಲಾಗುತ್ತದೆ.
"Visit Kelasaa.in for the most recent job notifications and updates."
ಹಾಗಾದರೆ ಗಗನಸಖಿ ವೃತ್ತಿಯ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು?
ಈ ವೃತ್ತಿಯಲ್ಲಿ ನೀವು ಆರಾಮಾಗಿ ಆರಂಭದಲ್ಲೇ ಸುಮಾರು ₹25,000-₹50,000 ಆಕರ್ಷಕ ಸಂಬಳ ಸಿಗುತ್ತದೆ, ಅದಕ್ಕೂ ಮೀರಿ ನೀವು ಹೆಚ್ಚು ಅನುಭವ ಹೊಂದಿದ್ದರೆ ₹1 ಲಕ್ಷಕ್ಕೂ ಹೆಚ್ಚು ಗಳಿಕೆ ಮಾಡಬಹುದು.
ಇಲ್ಲಿ ಇನ್ನೊಂದು ವಿಶೇಷ ಅನುಕೂಲ ಏನಂದ್ರೆ ಪ್ರಪಚದ ವಿವಿಧ ಸ್ಥಳಗಳಿಗೆ ಪ್ರಯಾಣ ಮಾಡುವಂತಹ ಅವಕಾಶ ಸಿಗುತ್ತದೆ. ಇದರ ಜೊತೆಗೆ ಈಗೀಗ ವಿಮಾನಯಾನ ಉದ್ಯಮ ಬೆಳೆಯುತ್ತಿರುವುದರಿಂದ ಉತ್ತಮ ವೃತ್ತಿಭವಿಷ್ಯ ಕೂಡ ನಿರೀಕ್ಷಿಸಬಹುದು.
ವೈವಿಧ್ಯಮಯ ಆಕರ್ಷಕ ಮತ್ತು ಗ್ಲಾಮರಸ್ ವೃತ್ತಿಯಾಗಿದ್ದು ಒಳ್ಳೆಯ ಜೀವನಶೈಲಿ ನಡೆಸಲು ಇದು ಸಹಕಾರಿಯಾಗಿದೆ. ಸೀನಿಯರ್ ಕ್ಯಾಬಿನ್ ಸಿಬ್ಬಂದಿ, ಕ್ಯಾಬಿನ್ ಸೂಪರ್‌ವೈಸರ್, ಟ್ರೈನರ್ ಮುಂತಾದ ಹುದ್ದೆಗಳಿಗೆ ಆಯ್ಕೆ ಆದಂತೆ ಹೆಚ್ಚಿನ ಬಡ್ತಿ ತೆಗೆದುಕೊಳ್ಳಬಹುದು.
ನೀವೇನಾದರು ಯಶಸ್ವಿ ಕ್ಯಾಬಿನ್ ಸಿಬ್ಬಂದಿಯಾಗಲು ಬಯಸಿದರೆ ಇಲ್ಲಿವೆ ಕೆಲವು ಸಲಹೆಗಳು.
ಮೊದಲಿಗೆ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಜೊತೆಗೆ ನಿಮ್ಮ ಇಂಗ್ಲಿಷ್ ಮತ್ತು ಇತರ ಭಾಷಾ ಕೌಶಲ್ಯಗಳನ್ನು ಕೂಡ ಸುಧಾರಣೇ ಮಾಡಿಕೊಳ್ಳಿ ಇದರಿಂದ ನಿಮ್ಮ ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ ಮತ್ತು ಉತ್ತಮ ನಡೆನುಡಿ ರೂಪಿಸುತ್ತದೆ.
ಪ್ರಮುಖವಾಗಿ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸದಾ ಸಿದ್ಧರಾಗಿರುವುದು ಮತ್ತು ತಾಳ್ಮೆಯಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ.
ಯಾವುದೇ ಕೋರ್ಸ್ ಸೇರುವ ಮುನ್ನ ಸರಿಯಾಗಿ ನೋಡಿಕೊಂಡು ಮುನ್ನೆಡೆಯಿರಿ ಇದರಿಂದ ವಂಚನೆ ಮಾಡುವ ಸಂಸ್ಥೆಗಳಿಂದ ನಿಮ್ಮನ್ನು ದೂರವಿಡುತ್ತದೆ, ಹಾಗೆ ಅಧಿಕೃತ ಮತ್ತು ಉತ್ತಮ ಪ್ಲೇಸ್‌ಮೆಂಟ್ ದಾಖಲೆಗಳನ್ನು ಹೊಂದಿರುವ ಸಂಸ್ಥೆಗಳನ್ನು ಆಯ್ಕೆ ಮಾಡಿ.
12ನೇ ತರಗತಿಯ ನಂತರ ಕ್ಯಾಬಿನ್ ಸಿಬ್ಬಂದಿಯಾಗುವುದು ಬಹುತೇಕ ಹಲವರ ಕನಸಾಗಿರುತ್ತದೆ, ನೀವು ಅದನ್ನ ನನಸಾಗಿಸಿಕೊಳ್ಳಲು ತಾಳ್ಮೆ, ಉತ್ಸಾಹದ ಜೊತೆಗೆ ಸರಿಯಾದ ತರಬೇತಿ ಮತ್ತು ಕಠಿಣ ಪರಿಶ್ರಮದಿಂದ ನೀವು ಈ ಕನಸಿನ ವೃತ್ತಿಯನ್ನು ಸರಳವಾಗಿ ಸಾಧಿಸಬಹುದು.
ನೀವು ಬೆಂಗಳೂರಿನಲ್ಲಿ ಜಾಬ್ ಹುಡುಕುತ್ತಿದ್ದರೆ ಅಥವಾ ಇತ್ತೀಚಿನ ಉದ್ಯೋಗ ಅಧಿಸೂಚನೆಗಳು ಮತ್ತು ಅಪ್‌ಡೇಟ್‌ಗಳಿಗಾಗಿ Kelasaa.in ಗೆ ಭೇಟಿ ನೀಡಿ.
Write A Comment
No Comments