🎯 5 ವರ್ಷಗಳಲ್ಲಿ ಫ್ರೆಶರ್‌ನಿಂದ ಮ್ಯಾನೇಜರ್‌ವರೆಗೆ: Career Growth Hacks
5 ವರ್ಷಗಳಲ್ಲಿ ಫ್ರೆಶರ್‌ನಿಂದ ಮ್ಯಾನೇಜರ್‌ವರೆಗೆ, ಯಶಸ್ಸಿನ ಮಾರ್ಗ – ಕೌಶಲ್ಯ ವೃದ್ಧಿ, ಪ್ರಾಮಾಣಿಕ ಕಾರ್ಯ ಮತ್ತು ಸಮಯೋಚಿತ ಅಪ್ಡೇಟ್ ಮೂಲಕ.
(ವೃತ್ತಿ ಬೆಳವಣಿಗೆ) Career growth ಯಾರಿಗೆ ಬೇಕಿಲ್ಲ ಹೇಳಿ?
ಎಲ್ಲರಿಗೂ ಬೇಕು. ಫ್ರೆಶರ್ ಆಗಿ ಕಡಿಮೆ ಸಂಬಳದಲ್ಲಿ ಕೆಲಸಕ್ಕೆ ಸೇರಿದವರ ಕನಸು ಮುಂದೊಂದು ದಿನ ನಾನು ಕೂಡ ಒಳ್ಳೆಯ ಹೆಸರು ಸಂಬಳ ಪಡೆಯುವುದೇ ಆಗಿರುತ್ತದೆ. – ಪ್ರಾಮಾಣಿಕ ಮತ್ತು ಪರಿಣಾಮಕಾರಿಯಾದ ಕೆಲಸ ಮಾಡಿ ಬೇಗನೆ ಪದವಿ ಏರಿಕೆ ಪಡೆದು, ಮ್ಯಾನೇಜರ್ ಸ್ಥಾನಕ್ಕೇರಬೇಕು ಎಂಬುದು ಎಲ್ಲರ ಗುರಿ ಕೂಡ, ಆದರೆ ಕೇವಲ “ಕೆಲಸ ಮಾಡಿದರೆ ಸಾಕು” ಎಂಬ ಭಾವನೆ ಇಂದಿನ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಇಲ್ಲ ಅದು ಉಪಯೋಗಕ್ಕೂ ಬರುವುದಿಲ್ಲ. ಹಾಗಾಗಿ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುವುದು, ಕೌಶಲ್ಯಗಳನ್ನು ಉದ್ಯೋಗ ಜೀವನದಲ್ಲಿ ಬೆಳೆಸಿಕೊಳ್ಳುವುದು ಒಂದು ಮಹತ್ವದ ಮೈಲಿಗಲ್ಲು ಆಗುತ್ತದೆ.
ಈ ಬ್ಲಾಗ್‌ನ ವಿಶೇಷ ಎಂದರೆ ನಿಮಗಾಗಿ 7 Career Growth Hacks in Kannada ದಲ್ಲಿ ನೀಡಿದ್ದೇವೆ, ಇವುಗಳು ನಿಮಗೆ ಉಪಯೋಗವಾಗಬಹುದು.
1️⃣ ನಿರಂತರ ಕಲಿಕೆ
ಕಲಿಯುವಿಕೆ ನಿರಂತರವಾಗಿದ್ದರೆ ಅದು Career success ನಲ್ಲಿ ಒಂದೊಳ್ಳೆ ದಾರಿಯಾಗುತ್ತದೆ, ಫ್ರೆಶರ್ ಆಗಿ ಸೇರಿದವರು ಯಾವಾಗಲೂ ಹೊಸ ಸ್ಕಿಲ್ಸ್ ಗಳನ್ನು ಕಲಿಯಲು ಉತ್ಸಾಹಿಯಾಗಿರಬೇಕು, ಜೊತೆಗೆ Online certification courses, workshops, webinars ಬಳಸಿಕೊಂಡು ನಿಮ್ಮ technical ಹಾಗೂ soft skills ಬೆಳೆಸಿಕೊಳ್ಳುವುದು ಕೂಡ ಪ್ರಮುಖವಾಗಿರುತ್ತದೆ. ಅನುಭವ ಹೇಗೆ ಮುಖ್ಯವೋ ಹಾಗೆ ಜ್ಞಾನವು ಅಷ್ಟೇ ಮುಖ್ಯವಾಗಿರುತ್ತದೆ. ಅಷ್ಟೇ ಅಲ್ಲದೆ Communication, problem-solving, ಟೈಮ್ ಮ್ಯಾನೇಜ್ಮೆಂಟ್ ಇವುಗಳು ನಿಮ್ಮ career growthಗೆ ಮೂಲ ಅಡಿಪಾಯಗಳಾಗುತ್ತವೆ.
ಕಲಿಕೆಯ ಹಾದಿ ನಿಲ್ಲಬಾರದು. Manager ಹುದ್ದೆಗೆ ತಲುಪುವುದು ಕೇವಲ ಜ್ಞಾನದಿಂದ ಮಾತ್ರ ಸಾಧ್ಯವಾಗುತ್ತದೆ.
2️⃣ ಮೆಂಟರ್ ಹುಡುಕುವುದು
ನಮಗಿಂತ ಅನುಭವಿಗಳಾದ ಒಬ್ಬ mentor ನಮ್ಮ ಕರಿಯರ್ ಮುಂದೆ ಹೋಗೋದಿಕ್ಕೆ ಒಂದೊಳ್ಳೆ ಮಾರ್ಗದರ್ಶಕರಾಗಿರುತ್ತಾರೆ. ಅವರ ಕೆಲಸದ ಅನುಭವ, ಕೌಶಲ್ಯಗಳು ನಮಗೆ ಕೆಲಸದಲ್ಲಿ ಕಲಿತುಕೊಳ್ಳಲು ಸಹಾಯವಾಗುತ್ತವೆ. ಜೊತೆಗೆ ಅವರ ಅನುಭವ ನಮಗೆ ಯಶಸ್ಸು ಪಡೆಯಲು ಕೀ ರೀತಿಯಲ್ಲಿ ಉಪಯೋಗವಾಗುತ್ತದೆ, ಅಷ್ಟೇ ಅಲ್ಲದೆ ತಪ್ಪು ಮಾಡಲು ಸಾಧ್ಯವಾಗುವುದಿಲ್ಲ, ಜೊತೆಗೆ ಸಮಯವನ್ನು ಕೂಡ ಉಳಿಸಬಹುದು..
ಪ್ರತಿಯೊಂದು ಕಂಪೆನಿಯಲ್ಲೂ ಒಬ್ಬ senior leader ಇರುತ್ತಾರೆ – ಅವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡರೆ ಅವರಿಂದ ಬೇಕಾದಷ್ಟು ಕಲಿಯಬಹುದು.
3️⃣ ಹೆಚ್ಚುವರಿ ಹೊಣೆಗಾರಿಕೆ
ನಾವು ಫ್ರೆಷೆರ್ ಆಗಿರೋದ್ರಿಂದ ನಮ್ಮ ಕೆಲಸ ಮಾತ್ರವಲ್ಲದೆ ಹೆಚ್ಚುವರಿ ಕೆಲಸದಲ್ಲೂ ನಾವು ತೊಡಗಿಕೊಳ್ಳಬೇಕು, ಇದು Fresher to Manager tipsಗಳಲ್ಲಿ ಅತಿಮುಖ್ಯವಾದದ್ದು. ಈ ರೀತಿ ಕೆಲಸಕ್ಕೆ ಸ್ವಯಂಪ್ರೇರಿತವಾಗಿ ಒಳಹೊಕ್ಕು ಕೆಲಸ ಮಾಡಿದರೆ ಮುಂಬರುವ ಹೊಸ ಕೆಲಸಗಳಿಗೆ ಸರಳವಾಗುತ್ತದೆ. ಹೊಸ ಹೊಸ projectಗಳಲ್ಲಿ ಹಿಂಜರಿಯದೆ leadership role ತೆಗೆದುಕೊಳ್ಳುವುದು ಮಾಡಿದಾಗ ಕಂಪನಿಯ senior management ನಮ್ಮನ್ನು ಬೇಗ ಗುರುತಿಸುತ್ತಾರೆ
4️⃣ Networking ಮಹತ್ವ
ನೆಟ್ವರ್ಕಿಂಗ್ ಎನ್ನುವುದು ಕೇವಲ ಸ್ನೇಹಿತರನ್ನು ಮಾಡಿಕೊಳ್ಳುವುದು ಅಲ್ಲ – ಅದು ನಮ್ಮcareer growth ನಲ್ಲಿ ಪ್ರಮುಖ ಹಂತವಾಗಿ ಪರಿಣಮಿಸುತ್ತದೆ. ಆಫೀಸ್ ಒಳಗೆ ಸಹೋದ್ಯೋಗಿಗಳು ಮತ್ತು seniors ಜೊತೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು, ಹಾಗೆ ಆಫೀಸ್ ಹೊರಗೆ Indeed, LinkedIn, job fairs, industry seminars ನಲ್ಲಿ network ಮಾಡಿಕೊಳ್ಳಬೇಕು, ಒಳ್ಳೆಯ network ನಿಮಗೆ career opportunities ಗೆ ಅವಕಾಶ ಮಾಡಿಕೊಡುತ್ತದೆ.
5️⃣ ನಾಯಕತ್ವದ ಮನಸ್ಥಿತಿ ಬೆಳೆಸಿಕೊಳ್ಳಿ
ಮ್ಯಾನೇಜರ್ ಆಗೋದು ಎಂದರೆ ಅದು ಕೇವಲ ಆ ಪದವಿ ಪಡೆಯುವುದು ಅಲ್ಲ, ಅದು ಒಂದು ಮನಸ್ಥಿತಿ, ಸಾಮಾನ್ಯ ಉದ್ಯೋಗಿಯೇ ಬೇರೆ ಮ್ಯಾನೇಜರ್ ಪದವಿಯೇ ಬೇರೆ ಎರಡಕ್ಕೂ ಅದರದ್ದೇ ಆದ ಕೆಲಸ ಜವಾಬ್ದಾರಿ ಇರುತ್ತವೆ. ಒಂದು ಟೀಮ್ ನಾ ನಿರ್ವಹಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ. “ನಾನು” ಅಲ್ಲ, “ನಾವು” ಎನ್ನುವಂತಹ ಮನೋಭಾವದ ಜೊತೆಗೆ ಟೀಂ ಸದಸ್ಯರ ನಡುವೆ ಆಗುವ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರಬೇಕು. ಈ ಮನೋಭಾವ ಪ್ರೆಶರ್ ಆಗಿರುವಾಗಲೇ ನಾವು ರೂಡಿಸಿಕೊಳ್ಳಬೇಕು.
6️⃣ ಪ್ರತಿಕ್ರಿಯೆಯನ್ನು (Feedback) ಸ್ವೀಕರಿಸಿ ಮತ್ತು ಸುಧಾರಿಸಿ.
ಯಾರೂ ತಪ್ಪು ಎಂದು ಹೇಳಲು ಆಗುವುದಿಲ್ಲ, ಏಕೆಂದರೆ ತಪ್ಪುಗಳು ಸಾಮಾನ್ಯ. ಆದರೆ ಪ್ರತಿಕ್ರಿಯೆ ಸ್ವಿಕರಿಸಿಕೊಂಡು, ಅದರಿಂದ ಒಂದು ಹೊಸ ಪಾಠ ಕಲಿತುಕೊಳ್ಳುವುದು ತುಂಬಾ ಮುಖ್ಯ.
Seniors ಕೊಡುವ feedback ಅನ್ನು ನಾವು ತಪ್ಪಾಗಿ ಅರ್ಥಿಸಿಕೊಳ್ಳದೆ ಪಾಸಿಟಿವ್ ಆಗಿ ತೆಗೆದುಕೊಂಡು, ಕಲಿಯಲು ಇದೊಂದು ಅವಕಾಶ ಎಂದು ಮುನ್ನಡೆಯಬೇಕು, ಇದರಿಂದ ನಮ್ಮ ದುರ್ಬಲತೆಗಳನ್ನು ತಿದ್ದಿಕೊಳ್ಳಲು, ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ, ಇದರಿಂದ ನಮ್ಮ promotion ಆಗುವಂತಹ ಅವಕಾಶಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
7️⃣ ಸ್ಮಾರ್ಟ್ ಕೆಲಸ ಮತ್ತು ಸಮಯ ನಿರ್ವಹಣೆ (Smart Work & Time Management)
ವೃತ್ತಿ ಜೀವನ ಸಕ್ಸಸ್ ಹೊಂದಲು ಕೇವಲ ಹೆಚ್ಚು ಸಮಯ ಕೆಲಸ ಮಾಡುವುದು ಆಗಿರುವುದಿಲ್ಲಅದರ ಜೊತೆಗೆ ಸ್ಮಾರ್ಟ್ ಕೆಲಸ ಮಾಡಲೇಬೇಕಾಗುತ್ತದೆ. ಆದ್ಯತೆಗಳನ್ನು ಸಮಯಕ್ಕೆ ತಕ್ಕಂತೆ ಮಾಡುವುದು, ಆಯಾ ದಿನದ Target ಅಥವಾ Deadlines ಗಳನ್ನೂ ಮುಗಿಸುವುದರ ಜೊತೆಗೆ ಕೆಲಸ-ಜೀವನದ ಸಮತೋಲನ (Work-life balance) ಕಾಪಾಡಿಕೊಳ್ಳಬೇಕು.
👉 ಒಟ್ಟಾರೆ ಹೇಳಬೇಕಾದರೆ – ಫ್ರೆಶರ್ ಆಗಿ ಪ್ರಾರಂಭಿಸಿದರೂ, 5 ವರ್ಷಗಳಲ್ಲಿ ಮ್ಯಾನೇಜರ್ ಹಂತ ತಲುಪಬಹುದು ಆದರೆ ನೆನೆಪಿರಲಿ ಇದಕ್ಕೆ ನಿರಂತರ ಕಲಿಕೆ, ಪರಿಶ್ರಮ, ಅಗತ್ಯವಾಗಿರುತ್ತದೆ.
👉 For more job updates visit kelasaa.in.
Write A Comment
No Comments