Coding ಇಲ್ಲದೆಯೇ IT ಕ್ಷೇತ್ರದಲ್ಲಿ ನುಗ್ಗಿ ಬೆಳೆವ ಚಾನ್ಸ್ – UI/UX ಡಿಸೈನ್ ಕಲಿಯಿರಿ!
ಒಳ್ಳೆಯ ಡಿಸೈನ್ ಮಾತ್ರವಲ್ಲ, ಸುಲಭ ಅನುಭವವೂ ಬೇಕು! ಅದಕ್ಕೇ UI/UX ಈಗಿನ ಡಿಜಿಟಲ್ ಜಗತ್ತಿನ ಹೃದಯವಾಗಿದೆ.
ನಾವು ಮೊಬೈಲ್ ಅಪ್ಲಿಕೇಶನ್, ವೆಬ್‌ಸೈಟ್ ಅಥವಾ ಇನ್ಯಾವುದೇ ಡಿಜಿಟಲ್ ಉತ್ಪನ್ನವನ್ನು ಬಳಸುವಾಗ, ಅದರ ಡಿಸೈನ್ ಮತ್ತು ಬಳಸಿದಾಗ ನಮಗೆ ಆಗುವಂತಹ ಅನುಭವಗಳ ಹಿಂದೆ UI ಮತ್ತು UX ಎಂಬ ಎರಡು ಮುಖ್ಯವಾದ ತತ್ವಗಳಿವೆ. ಇವೆರಡೂ ಒಂದಕ್ಕೊಂದು ಪೂರಕವಾಗಿದ್ದರೂ, ಅವುಗಳ ಕೆಲಸ ಬೇರೆ ಬೇರೆಯಾಗಿರುತ್ತವೆ.
ಇಂದಿನ ಡಿಜಿಟಲ್ ಯುಗದಲ್ಲಿ, ಪ್ರತಿಯೊಂದು ವೆಬ್‌ಸೈಟ್, ಅಪ್ಲಿಕೇಷನ್, ಸಾಫ್ಟ್‌ವೇರ್ ಅಥವಾ ಯಾವ ತಂತ್ರಜ್ಞಾನವನ್ನು ನೋಡಿದರೂ, ಅದು ಬಳಕೆದಾರನಿಗೆ ಎಷ್ಟು ಆಕರ್ಷಕವಾಗಿ ಮತ್ತು ಸುಲಭವಾಗಿ ಅನುಭವ ನೀಡಬಲ್ಲದು ಎಂಬುದು ಅತ್ಯಂತ ಮುಖ್ಯವಾಗಿದೆ. ಇದಕ್ಕೇ ಕಾರಣ ಎಂದರೆ ಅದು UI (User Interface) ಮತ್ತು UX (User Experience)
ನೀವು ಒಂದು ಆಪ್‌ನೋಡಿದಾಗ ಅಥವಾ ವೆಬ್‌ಸೈಟ್ ಓಪನ್ ಮಾಡಿದಾಗ ಮೊದಲನೆಯದಾಗಿ, ನೋಡುವುದು UI, ಮತ್ತು ಅನುಭವಿಸುವದೂ UX. ಅಂದರೆ, ಆ ಡಿಸೈನ್ ಚೆನ್ನಾಗಿದಿಯಾ? ಬಳಸೋಕೆ ಸುಲಭವಾಗಿದೆಯಾ? ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಇದನ್ನೇ ತೆಗೆದು ಹಾಕೋದಿಕ್ಕೆ ಸಹಾಯ ಮಾಡುವುದೇ UI/UX ಡಿಸೈನ್ . ಈ ಕ್ಷೇತ್ರಕ್ಕೆ ಇದೀಗ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ, ಈ ಕೋರ್ಸ್ ಬಗ್ಗೆ ನೀವೇನಾದರೂ ಸಂಪೂರ್ಣವಾಗಿ ತಿಳಿದುಕೊಂಡರೆ ನಿಮ್ಮ ತಲೆಯಲ್ಲೂ UI/UX ಕೋರ್ಸ್‌ಗಳ ಬಗ್ಗೆ, ನಾನೂ ಕಲಿಯಲೇಬೇಕು ಎನ್ನುವಂತಹ ಯೋಚನೆ ಬರುವುದು ಗ್ಯಾರಂಟಿ.
ಈ ಕೋರ್ಸ್‌ನಲ್ಲಿ ನೀವು ಕಲಿಯುವುದು Design thinking, user research, wireframes ಹೀಗೆ visual ideas ಅಷ್ಟೇ ಅಲ್ಲದೆ ಹಂತ ಹಂತವಾಗಿ final design ಗಳನ್ನು ಹೇಗೆ ಮಾಡುವುದು ಎನ್ನುವುದನ್ನು ಸಹ ತಿಳಿಸಿಕೊಡುತ್ತದೆ. Coding background ಎಲ್ಲವನ್ನು ಸರಳವಾಗಿ ಕಲಿಯಬಹುದು. ಅದಕ್ಕೆಲ್ಲಾ creativity, ಮತ್ತು ಕಲಿಕೆಯಲ್ಲಿ ಆಸಕ್ತಿ ಇದ್ದರೆ ಸಾಕು.
ಹೀಗಾಗಿ ಆರ್ಟ್ಸ್ ಹಿನ್ನಲೆ ಇರುವವರು, web designers, ಅಥವಾ ಇನ್ಯಾರಾದರೂ ವೃತ್ತಿ ಬದಲಾವಣೆ ಮಾಡಬೇಕು ಎಂದುಕೊಂಡಿದ್ದರೆ ಅತಂತವರು ಈ ಕೋರ್ಸ್ ಆಯ್ಕೆ ಮಾಡಬಹುದು. ಉದ್ಯೋಗ ಅವಕಾಶಗಳು ಕೂಡ ತುಂಬಾ ಇವೆ – UI designer, UX researcher, Product designer ಎನ್ನುವಂತಹ ಫ್ಯಾನ್ಸಿ ಜಾಬ್ ಟೈಟಲ್ಸ್ ಜೊತೆಗೆ ಆಕರ್ಷಕ ಸಂಬಳ ಕೂಡ ಸಿಗುತ್ತದೆ, ಅದರಲ್ಲೂ ಅನುಭವ ಇದ್ದವರಿಗೆ ಅತ್ಯಾಕರ್ಷಕ ಸಂಬಳ ಸಿಗುವುದು ಖಚಿತ.
ಒಟ್ಟಿನಲ್ಲಿ ಹೇಳುವುದಾದರೆ, design & creativity ಕ್ಷೇತ್ರದಲ್ಲಿ ಉತ್ಸಾಹ ಇರುವವರಿಗೆ ಇದು ಗೋಲ್ಡನ್ ಚಾನ್ಸ್. ಪ್ರಾರಂಭದಲ್ಲಿ YouTube ನೊಂದಿಗೆ ಪ್ರಾರಂಭಿಸಿ ಅಥವಾ Udemy/Coursera ನಲ್ಲಿ ಸರಿಯಾದ ಕೋರ್ಸ್ ಗೆ ಎಡ್ಮಿಷನ್ ತೆಗೆದುಕೊಂಡು ಕಲಿತುಕೊಳ್ಳಬಹುದು. ಬರುವ ದಿನಗಳಲ್ಲಿ ಎಲ್ಲವೂ design-centric ಆಗುತ್ತಿರುವುದು ನಿಮಗೆ ತಿಳಿದಿರುವ ವಿಷಯ!
ನಾವು ಈ ಕೋರ್ಸ್ ನಲ್ಲಿ ಏನೇನು ಕಲಿಯಬಹುದು?
UI/UX Design Basics
Wireframing & Prototyping
Design Thinking Process
User Research & Personas
Usability Testing
Tools: Figma, Adobe XD, Sketch
Responsive Design
Portfolio Projects
UI ಎಂದರೆ:
ಬಳಕೆದಾರನು ನೋಡುವ ಎಲ್ಲಾ ದೃಶ್ಯ ಮಾದರಿಗಳು – ಬಟನ್, ಲೇಔಟ್, ಪಟ್ಟಿಭಾಗ, ಬಣ್ಣಗಳು ಇವುಗಳೆಲ್ಲಾ UI ಗೆ ಸೇರಿವೆ.
UX ಎಂದರೆ:
ಬಳಕೆದಾರನಿಗೆ ಆ ಆಪ್ ಅಥವಾ ವೆಬ್‌ಸೈಟ್ ಬಳಸುವಾಗ ಬರುವ ಅನುಭವ, ಸುಲಭತೆ, ತೃಪ್ತಿ – ಇವೆಲ್ಲಾ UX ನ ಭಾಗವಾಗಿವೆ.
ಉದ್ಯೋಗ ಅವಕಾಶಗಳು
UI ಡಿಸೈನರ್
UX ಡಿಸೈನರ್
ಪ್ರಾಡಕ್ಟ್ ಡಿಸೈನರ್
Interaction ಡಿಸೈನರ್
Freelance ಡಿಸೈನರ್
UX Researcher
ಈ ರೀತಿ ಹಲವಾರು ಉದ್ಯೋಗಗಳನ್ನು ಪಡೆಯಬಹುದಾಗಿದೆ, ಸದ್ಯಕ್ಕೆ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆಯಲ್ಲಿರುವ ಉದ್ಯೋಗ ವಲಯಗಳಲ್ಲಿ ಈ ಕ್ಷೇತ್ರವು ಕೂಡ ಒಂದು.
Write A Comment
No Comments