HVF ಜೂನಿಯರ್ ಟೆಕ್ನಿಷಿಯನ್ ನೇಮಕಾತಿ 2025: ITI ಪಾಸಾದವರಿಗೆ 1850 ಹುದ್ದೆಗಳಿಗೆ ಅರ್ಜಿ ಆಹ್ವಾನ! Jobs in INDIA !

post

ಹೆವಿ ವೆಹಿಕಲ್ಸ್ ಫ್ಯಾಕ್ಟರಿ (HVF) - 1850 ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.

ಅರ್ಜಿ ಸಲ್ಲಿಸುವುದು ಹೇಗೆ?
 

ಅರ್ಜಿದಾರರು HVF ನ ಅಧಿಕೃತ ವೆಬ್‌ಸೈಟ್ oftr.formflix.org ಗೆ ಹೋಗಿ  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲಿಗೆ, ಅಧಿಕೃತ ಅಧಿಸೂಚನೆಯಲ್ಲಿ ಯಾವ ಮಾಹಿತಿ ನೀಡಲಾಗಿದೆ ಎಂದುಸಂಪೂರ್ಣವಾಗಿ ಓದಿಕೊಂಡು, ಹುದ್ದೆಯ ವಿವರಗಳು, ವಯಸ್ಸಿನ ಮಿತಿ, ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
ಹೆವಿ ವೆಹಿಕಲ್ಸ್ ಫ್ಯಾಕ್ಟರಿ (HVF) ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಒಟ್ಟು 1850 ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳ ಭರ್ತಿ ಮಾಡಲು, ಐಟಿಐ (ITI) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಜೂನ್ 28, 2025 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಶುರುಮಾಡಬಹುದು, ಮತ್ತು ಜುಲೈ 18, 2025 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು HVF ನ ಅಧಿಕೃತ ವೆಬ್‌ಸೈಟ್ oftr.formflix.org ಗೆ ಭೇಟಿ ನೀಡಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 300/- ಅರ್ಜಿ ಶುಲ್ಕ ನಿಯಮಿತಗೊಳಿಸಲಾಗಿದೆ. ಆದರೆ, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ವಿಕಲಚೇತನರು (PwBD), ಮಾಜಿ ಸೈನಿಕರು (Ex-SM) ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿ ಮಾಡಬಹುದಾಗಿದೆ. ವಯಸ್ಸಿನ ಮಿತಿಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷಗಳನ್ನು ಮೀರಬಾರದು. ಸರ್ಕಾರದ ನಿಯಮಾನುಸಾರವಾಗಿ, ಕೆಲವು ವರ್ಗದ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುಲಾಗುತ್ತದೆ.
 

ಹೆವಿ ವೆಹಿಕಲ್ಸ್ ಫ್ಯಾಕ್ಟರಿ (HVF) ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಯಲ್ಲಿ ಕೆಳಗಿನ ಟ್ರೇಡ್‌ಗಳಲ್ಲಿ NAC (National Apprenticeship Certificate) ಅಥವಾ NTC (National Trade Certificate) ಹೊಂದಿರುವವರು ಅರ್ಜಿ ಸಲ್ಲಿಸಬಹುದು:
ಕಮ್ಮಾರ/ ಫೌಂಡ್ರಿ / ಫೌಂಡ್ರಿ ಮ್ಯಾನ್
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್
ಪವರ್ ಎಲೆಕ್ಟ್ರಿಷಿಯನ್
ಫಿಟ್ಟರ್ ಜನರಲ್
ಎಲೆಕ್ಟ್ರೋಪ್ಲೇಟರ್
ಮೆಷಿನಿಸ್ಟ್
ಬಡಗಿ
 

ಕ್ರೇನ್ ಕಾರ್ಯಾಚರಣೆ  ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹತ್ತನೇ ತರಗತಿ ಅಥವಾ ಅದಕ್ಕೆ ಸಮಾನವಾದ ಬೋರ್ಡ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು, ಭಾರೀ ವಾಹನಗಳಿಗೆ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು ಮತ್ತು ಕ್ರೇನ್ ಕಾರ್ಯಾಚರಣೆ ನಿರ್ವಹಿಸುವಲ್ಲಿ ಕನಿಷ್ಠ 02 ವರ್ಷಗಳ ಅನುಭವ ಹೊಂದಿರಬೇಕು.
ಆಯ್ಕೆಯಾದ ಜೂನಿಯರ್ ಟೆಕ್ನಿಷಿಯನ್‌ಗಳಿಗೆ, ಗುತ್ತಿಗೆ ಆಧಾರದ ಮೇಲೆ, ತಿಂಗಳಿಗೆ ಕನಿಷ್ಠ ರೂ. 21,000/- ಮೂಲ ವೇತನ ನೀಡಲಾಗುತ್ತದೆ. ಇದರ ಜೊತೆಗೆ, ಅನ್ವಯವಾಗುವ ಕೈಗಾರಿಕಾ ತುಟ್ಟಿ ಭತ್ಯೆ (IDA) ಮತ್ತು ಮೂಲ ವೇತನದ 5% ರಷ್ಟು ಹೆಚ್ಚುವರಿ ಭತ್ಯೆಯೂ ಸಿಗಲಿದೆ. ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಮೂಲ ವೇತನದ ಮೇಲೆ 3% ದರದಲ್ಲಿ ವಾರ್ಷಿಕ ವೇತನ ಹೆಚ್ಚಳವೂ ಸಿಗುತ್ತದೆ.
 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಷ್ಟಪಡುವವರು,ಇತ್ತೀಚಿನ ಮಾಹಿತಿ ಮತ್ತು ಸಂಪೂರ್ಣ ವಿವರಗಳಿಗಾಗಿ  HVF ನ ಅಧಿಕೃತ ಅಧಿಸೂಚನೆಯನ್ನು ತಪ್ಪದೆ ಪರಿಶೀಲಿಸಿ. ಹೆಚ್ಚಿನ ವಿವರಗಳಿಗಾಗಿ, HVF ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
 

HVF ಜೂನಿಯರ್ ಟೆಕ್ನಿಷಿಯನ್ ನೇಮಕಾತಿ 2025: FAQ ಗಳು
ಒಟ್ಟು ಎಷ್ಟು ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
-  1850 ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಏನಿರಬೇಕು?
- ಅಭ್ಯರ್ಥಿಗಳು ಐಟಿಐ (ITI) ವಿದ್ಯಾರ್ಹತೆಯನ್ನು ಹೊಂದಿರಬೇಕು. 
ಸಂಬಳದಲ್ಲಿ ವಾರ್ಷಿಕ ಹೆಚ್ಚಳ ಯಾವಾಗ ಅನ್ವಯಿಸುತ್ತದೆ?
- ಸೇವಾವಧಿಯನ್ನು ಪೂರ್ಣಗೊಳಿಸಿದ ನಂತರ ಮಾತ್ರ, ಮೂಲ ವೇತನದ ಮೇಲೆ 3% ದರದಲ್ಲಿ ವಾರ್ಷಿಕ ವೇತನ ಹೆಚ್ಚಾಗುತ್ತದೆ. 
HVF ಜೂನಿಯರ್ ಟೆಕ್ನಿಷಿಯನ್ ಹುದ್ದೆಯ ಕೆಲಸದ ಸ್ಥಳ (Job Location) ಯಾವುದು?
- ಆಯ್ಕೆಯಾದ ಅಭ್ಯರ್ಥಿಗಳು HVF ನಲ್ಲಿ, ಅವಾಡಿ, ಚೆನ್ನೈ (ತಮಿಳುನಾಡು) ನಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.


ನೀವೇನಾದರೂ 10th, 12th, ಮುಗಿದ ಮೇಲೆ ಉದ್ಯೋಗವನ್ನು ಹುಡುಕುತ್ತಿದ್ದರೆ ಈ ಸೈಟ್ ನಿಮಗೆ ಸಹಾಯ ಮಾಡುತ್ತದೆ. kelasaa.in


Share This Job:

Write A Comment

    No Comments