IBPS PO 2025 ಅಧಿಸೂಚನೆ ಬಿಡುಗಡೆ: 5208 ಬ್ಯಾಂಕ್ ಪಿಒ ಹುದ್ದೆಗಳಿಗೆ ಅರ್ಜಿ ಆಹ್ವಾನ! ✅ Careers in Banking

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಒಂದು ಅದ್ಭುತ ಅವಕಾಶ!
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಒಂದು ಅದ್ಭುತ ಅವಕಾಶ! ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳ ನೇಮಕಾತಿಗಾಗಿ 2025ರ ಅಧಿಸೂಚನೆಯನ್ನು ಜೂನ್ 30, 2025 ರಂದು ಪ್ರಕಟಿಸಲಾಗಿದೆ.
ಈ ವರ್ಷದಲ್ಲಿ, ಪ್ರಮುಖವಾಗಿ ಭಾರತದ 11 ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಟ್ಟು 5208 ಪ್ರೊಬೇಷನರಿ ಆಫೀಸರ್ / ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗೆ ನೇಮಕ ಮಾಡಲಾಗುತ್ತಿದೆ. ಯಾವುದೇ ಕ್ಷೇತ್ರದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅರ್ಹರಾಗಿರುತ್ತಾರೆ.
ಪ್ರಮುಖ ಅರ್ಜಿ ಸಲ್ಲಿಸುವ ದಿನಾಂಕಗಳು: (ತಾತ್ಕಾಲಿಕವಾಗಿ ಅಂದಾಜು)
ಅರ್ಜಿ ಸಲ್ಲಿಕೆ ಪ್ರಾರಂಭವಾಗುವುದು: ಜುಲೈ 1, 2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ಜುಲೈ 21, 2025
ಪೂರ್ವಭಾವಿ ಪರೀಕ್ಷೆ ನಡೆಯುವುದು: ಆಗಸ್ಟ್ 17, 23, 24, 2025
ಮುಖ್ಯ ಪರೀಕ್ಷೆ ಇರುವುದು: ಅಕ್ಟೋಬರ್ 12, 2025
ಸಂದರ್ಶನ ನಡೆಯುವುದು: ಡಿಸೆಂಬರ್ 2025/ಜನವರಿ 2026
ಅಂತಿಮ ಫಲಿತಾಂಶ: ಜನವರಿ/ಫೆಬ್ರವರಿ 2026
ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳಿಗೆ: ರೂ. 175/-
ಸಾಮಾನ್ಯ ಮತ್ತು ಇತರರಿಗೆ: ರೂ. 850/-
IBPS ನೇಮಕಾತಿ 2025 ವಯಸ್ಸಿನ ಮಿತಿ -
ಕನಿಷ್ಠ ವಯಸ್ಸಿನ ಮಿತಿ: 20 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 30 ವರ್ಷಗಳು
ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
Visit Kelasaa.in for the most recent job notifications and updates.
ಅರ್ಹತೆ:
ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ.
IBPS PO 2025 ಅಧಿಸೂಚನೆಯ FAQ'S ಗಳು
IBPS PO - ಪರೀಕ್ಷೆ ಎಂದರೇನು?
ಪ್ರತಿ ವರ್ಷ, ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಮಾಡಲು ಈ ಸಂಸ್ಥೆ IBPS PO ಪರೀಕ್ಷೆಯನ್ನು ನಡೆಸುತ್ತದೆ. ಈ ಪರೀಕ್ಷೆಯ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಅಗತ್ಯವಿರುವಂತಹ ಪ್ರೊಬೇಷನರಿ ಆಫೀಸರ್‌ಗಳನ್ನು (PO) ಆಯ್ಕೆ ಮಾಡುತ್ತದೆ. IBPS ಸಂಸ್ಥೆಯು ಬ್ಯಾಂಕುಗಳಿಗೆ ನೇಮಕಾತಿ ಮತ್ತು ತರಬೇತಿ ಸೇವೆಗಳನ್ನು ಸಹ ನೀಡುತ್ತದೆ.
IBPS PO ಪರೀಕ್ಷೆಯನ್ನು ವರ್ಷಕ್ಕೆ ಎಷ್ಟುಬಾರಿ ನಡೆಸಲಾಗುತ್ತದೆ?
ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಪ್ರತಿ ವರ್ಷ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ IBPS PO ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಎಂಬ ಮೂರು ಹಂತಗಳಿವೆ.
ಪೂರ್ವಭಾವಿ ಪರೀಕ್ಷೆಯು 100 ಅಂಕಗಳಿಗೆ ನಡೆಯುತ್ತದೆ.
ಮುಖ್ಯ ಪರೀಕ್ಷೆಯಲ್ಲಿ ವಸ್ತುನಿಷ್ಠ ಮತ್ತು ವಿವರಣಾತ್ಮಕ ಪ್ರಶ್ನೆಗಳು ಇದ್ದು, ಆ ಪರೀಕ್ಷೆಯು 250 ಅಂಕಗಳಿಗೆ ಇರುತ್ತದೆ.
ಈ ಪರೀಕ್ಷೆಯ ಸಂದರ್ಶನವು 100 ಅಂಕಗಳಿಗೆ ಇರುತ್ತದೆ.
ಅಂತಿಮ ಆಯ್ಕೆ ಪ್ರಕ್ರಿಯೆಯು ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಅಂಕಗಳ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆ.
IBPS PO 2025 ಅರ್ಜಿ ಶುಲ್ಕ ಎಷ್ಟು?
SC/ST/PWD ಅಭ್ಯರ್ಥಿಗಳಿಗೆ - 175/-
ಸಾಮಾನ್ಯರಿಗೆ - 850/-
ನೀವು ಬೆಂಗಳೂರಿನಲ್ಲಿ ಜಾಬ್ ಹುಡುಕುತ್ತಿದ್ದರೆ ಅಥವಾ ಇತ್ತೀಚಿನ ಉದ್ಯೋಗ ಅಧಿಸೂಚನೆಗಳು ಮತ್ತು ಅಪ್‌ಡೇಟ್‌ಗಳಿಗಾಗಿ Kelasaa.in ಗೆ ಭೇಟಿ ನೀಡಿ.
Write A Comment
No Comments