IBPS RRB XIV ನೇಮಕಾತಿ 2025: ನಿಮ್ಮ ಬ್ಯಾಂಕಿಂಗ್ ಕನಸಿಗೆ ಒಂದು ಅದ್ಭುತ ಅವಕಾಶ!

post

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಳ್ಳುವ ಯುವಕರಿಗೆ ಇಲ್ಲಿದೆ ಒಂದು ಭರ್ಜರಿ ವಿಷಯ! IBPS RRB XIV ನೇಮಕಾತಿ 2025

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಳ್ಳುವುದು ಪ್ರತಿಯೊಬ್ಬರ ಕನಸಾಗಿರುತ್ತದೆ, ಅಂತಹ ಎಷ್ಟೋ ಯುವಕರಿಗೆ ಇಲ್ಲಿದೆ ಒಂದು ಭರ್ಜರಿ ವಿಷಯ! ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ (RRB) ಬೃಹತ್ ನೇಮಕಾತಿ ಕರೆಯಲಾಗಿದೆ. IBPS RRB XIV ಈ ಸಲದ  2025 ರ ನೇಮಕಾತಿಯಲ್ಲಿ ಒಟ್ಟು 13,217 ಕಚೇರಿ ಸಹಾಯಕ (Office Assistant) ಮತ್ತು ಅಧಿಕಾರಿಗಳ (Officers) ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಇದು ಯಾರು ಸರ್ಕಾರಿ ಉದ್ಯೋಗವನ್ನು ಪಡೆಯಲು ಸತತ ಪ್ರಯತ್ನ ಮಾಡುತ್ತಿದ್ದೀರೋ ಅವರಿಗೆ ನನಸು ಮಾಡಿಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಿದೆ.

ಅರ್ಹರಾಗಿರುವಂತಹ ಮತ್ತು ಆಸಾಲ್ಟಿ ಇರುವಂತಹ ಅಭ್ಯರ್ಥಿಗಳು ಸೆಪ್ಟೆಂಬರ್ 21, 2025 ರೊಳಗೆ ಈ ಕುರಿತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಬ್ಲಾಗ್ ಪೋಸ್ಟ್‌ನಲ್ಲಿ, ನಾವು ಈ ನೇಮಕಾತಿ ಕುರಿತು ಅವಶ್ಯಕತೆ ಇರುವ ಎಲ್ಲಾ ವಿವರಗಳನ್ನು ಪೂರ್ಣವಾಗಿ ತಿಳಿಸಿರುತ್ತೇವೆ. ಅರ್ಹತೆ, ವಯಸ್ಸಿನ ಮಿತಿ, ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಮತ್ತು ಬೇರೆ ಯಾವುದೇ ಪ್ರಮುಖ ಮಾಹಿತಿ ತಿಳಿದುಕೊಳ್ಳಲು ಈ ಬ್ಲಾಗ್ ಪೋಸ್ಟ್ ಅನ್ನು ಸಂಪೂರ್ಣವಾಗಿ ಓದಿ.

ಪ್ರಮುಖ ದಿನಾಂಕಗಳು
 

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ: 01-09-2025
 

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ಇರುವ ದಿನಾಂಕ: 21-09-2025
 

ಅರ್ಜಿ ಶುಲ್ಕ ಪಾವತಿ ಮಾಡಲು ಇರುವ ಕೊನೆಯ ದಿನಾಂಕ: 21-09-2025

 

ಈ ಬೃಹತ್ ನೇಮಕಾತಿಯಲ್ಲಿ ವಿವಿಧ ಹುದ್ದೆಗಳಿದ್ದು, ಪ್ರತಿ ಹುದ್ದೆಗೂ ಬೇರೆ ಬೇರೆ ಅರ್ಹತೆಗಳನ್ನು ನಿಗದಿ ಮಾಡಲಾಗಿದೆ. ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ನೀವು ಅರ್ಜಿ ಸಲ್ಲಿಕೆ ಮಾಡಬಹುದು.
 

ತಿಳಿದುಕೊಳ್ಳಿ: ಸರ್ಕಾರದ ನಿಯಮಗಳ ಪ್ರಕಾರ, ಮೀಸಲಾತಿ ವರ್ಗದವರಿಗೆ (SC/ST/OBC/PWD) ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಅನ್ವಯವಾಗುತ್ತದೆ.

 

ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ?

ಅರ್ಜಿ ಸಲ್ಲಿಕೆ ಮಾಡುವಾಗ ಶುಲ್ಕ ಪಾವತಿಸುವುದು ಕಡ್ಡಾಯ ನಿಯಮವಾಗಿದೆ. IBPS ಅಧಿಕೃತ ಅಧಿಸೂಚನೆಯಲ್ಲಿ ಶುಲ್ಕದ ವಿವರಗಳನ್ನು ಕೊಟ್ಟಿರುತ್ತಾರೆ ನೀವು ಅದನ್ನು ಪರಿಶೀಲಿಸಿಕೊಳ್ಳಿ ನಂತರ ಪ್ರಕ್ರಿಯೆಯನ್ನು ಮುಂದುವರೆಸಿ..

ನೆನಪಿರಲಿ: ಎಲ್ಲಾ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕು. ಬೇರೆ ಯಾವುದೇ ವಿಧಾನದಿಂದ ಸಲ್ಲಿಸಿದ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.

 

ಹಾಗಾದರೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?
 

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲಿಗೆ IBPS ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ibps.in ಎಂದು ಟೈಪ್ ಮಾಡಬೇಕು.

ಮುಖಪುಟದಲ್ಲಿ ಕಾಣುವ IBPS RRB XIV ನೇಮಕಾತಿ 2025 ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕೊಟ್ಟಿರುವಂತಹ ಪ್ರಕಟಣೆಯನ್ನು ಗಮನವಿಟ್ಟು ಸಂಪೂರ್ಣವಾಗಿ ಓದಿ, ನಿಮ್ಮ ಅರ್ಹತೆಯನ್ನು ಖಚಿತ ಮಾಡಿಕೊಳ್ಳಿ.

ನಂತರ Click here for New Registration ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕೊಡಬೇಕಾದ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ, ಹಾಗೆ ಅಗತ್ಯವಿರುವ ಎಲ್ಲಾ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನೋಂದಾಯಿಸಿಕೊಳ್ಳಿ.

ಜೊತೆಗೆ ನಿಮ್ಮ ಭಾವಚಿತ್ರ ಮತ್ತು ಸಹಿಯನ್ನು (signature) ಅಪ್‌ಲೋಡ್ ಮಾಡಿ, ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡಬೇಕು.

ಕೊನೆಯದಾಗಿ, ನಿಮ್ಮ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಭವಿಷ್ಯದ ಬಳಕೆಗಾಗಿ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಇದು ನಿಮ್ಮ ಬ್ಯಾಂಕಿಂಗ್ ವೃತ್ತಿಜೀವನಕ್ಕೆ ಒಂದು ಬಲವಾದ ಹೆಜ್ಜೆಯಾಗಬಹುದು. ಈ ಅವಕಾಶವನ್ನು ಉಪಯೋಗಿಸಿಕೊಂಡು ಮತ್ತು ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಪರಿಶೀಲಿಸಿ.

ಇದೇ ರೀತಿ ಮತ್ತಷ್ಟು ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ ನಮ್ಮ ಬ್ಲಾಗ್ ಅನ್ನು ನಿಯಮಿತವಾಗಿ ಪರಿಶೀಲಿಸಿ. ನಿಮ್ಮ ಮುಂದಿನ ಯಶಸ್ಸಿಗೆ ಶುಭ ಹಾರೈಕೆಗಳು!


 


Share This Job:

Write A Comment

    No Comments