IBPS SO ನೇಮಕಾತಿ 2025: 1007 ವಿಶೇಷ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ! 🚀

1007 SO ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಬ್ಯಾಂಕಿಂಗ್‌ನಲ್ಲಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಇದು ಸುವರ್ಣಾವಕಾಶ!
ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಆಸೆಯಿದ್ದರೆ ಇಲ್ಲಿದೆ ನಿಮಗೊಂದು ಒಳ್ಳೆಯ ಅವಕಾಶ ! ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS), ಒಟ್ಟು 1007 ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈಗ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ
IBPS SO ನೇಮಕಾತಿ 2025ಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜುಲೈ 1, 2025 ರಂದು ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 21, 2025. ಅರ್ಹ ಅಭ್ಯರ್ಥಿಗಳು IBPS ನ ಅಧಿಕೃತ ವೆಬ್‌ಸೈಟ್ ibps.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಒಟ್ಟು ಹುದ್ದೆಗಳು ಮತ್ತು ಅರ್ಹತಾ ಮಾನದಂಡಗಳು
ಈ ನೇಮಕಾತಿ ಅಡಿಯಲ್ಲಿ ಒಟ್ಟು 1007 SO ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಿವಿಧ ವಿಶೇಷ ವಿಭಾಗಗಳಿಗೆ ಈ ಹುದ್ದೆಗಳನ್ನು ನಿಗದಿಪಡಿಸಲಾಗಿದೆ.
ಶೈಕ್ಷಣಿಕ ಅರ್ಹತೆ:
ಯಾವುದೇ ಪದವಿ, B.Sc, B.Tech/BE, LLB, MA, M.Arch, ME/M.Tech, MBA/PGDM, PG ಡಿಪ್ಲೊಮಾ, PGDBM, PGDBA ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ನಿಮ್ಮ ವಿದ್ಯಾರ್ಹತೆ ಹುದ್ದೆಗೆ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅಧಿಕೃತ ಅಧಿಸೂಚನೆಯನ್ನು ಒಮ್ಮೆ ಪರಿಶೀಲಿಸಿ.
ವಯಸ್ಸಿನ ಮಿತಿ (ಜುಲೈ 01, 2025 ರಂತೆ):
ಕನಿಷ್ಠ ವಯಸ್ಸು: 20 ವರ್ಷಗಳು ಆಗಿರಬೇಕು.
ಗರಿಷ್ಠ ವಯಸ್ಸು: 30 ವರ್ಷಗಳು ಆಗಿರಬೇಕು.
ಅಭ್ಯರ್ಥಿಯು ಜುಲೈ 02, 1995 ಕ್ಕಿಂತ ಮೊದಲು ಮತ್ತು ಜುಲೈ 01, 2005 ರ ನಂತರ ಜನಿಸಿರಬಾರದು. ಅಷ್ಟೇ ಅಲ್ಲದೆ ಸರ್ಕಾರಿ ನಿಯಮಗಳ ಪ್ರಕಾರ, SC/ST/PwBD ವರ್ಗದ ಅರ್ಜಿದಾರರಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಅರ್ಜಿ ಶುಲ್ಕವನ್ನು ಈ ಕೆಳಗಿನಂತೆ ನಿರ್ದಿಷ್ಟವಾಗಿ ಇಡಲಾಗಿದೆ:
SC/ST/PwBD ಅಭ್ಯರ್ಥಿಗಳಿಗೆ: ರೂ. 175/- (ಜಿಎಸ್‌ಟಿ ಸೇರಿದಂತೆ)
ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ: ರೂ. 850/- (ಜಿಎಸ್‌ಟಿ ಸೇರಿದಂತೆ)
ಪರೀಕ್ಷಾ ವೇಳಾಪಟ್ಟಿ ಮತ್ತು ಅಂದಾಜಿಸಲಾದ ಪರೀಕ್ಷಾ ದಿನಾಂಕಗಳು ಹೀಗಿವೆ:
IBPS SO ನೇಮಕಾತಿಯು ಪೂರ್ವಭಾವಿ ಪರೀಕ್ಷೆ (Prelims), ಮುಖ್ಯ ಪರೀಕ್ಷೆ (Mains) ಮತ್ತು ಸಂದರ್ಶನಗಳನ್ನು ಸೇರಿರುತ್ತದೆ.
ಆನ್‌ಲೈನ್ ಪೂರ್ವಭಾವಿ ಪರೀಕ್ಷೆಯ ಕರೆ ಪತ್ರ ಡೌನ್‌ಲೋಡ್: ಆಗಸ್ಟ್, 2025
ಆನ್‌ಲೈನ್ ಪೂರ್ವಭಾವಿ ಪರೀಕ್ಷೆ: ಆಗಸ್ಟ್, 2025
ಆನ್‌ಲೈನ್ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ: ಸೆಪ್ಟೆಂಬರ್, 2025
ಮುಖ್ಯ ಪರೀಕ್ಷೆಯ ಕರೆ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವುದು: ಸೆಪ್ಟೆಂಬರ್ / ಅಕ್ಟೋಬರ್, 2025
ಆನ್‌ಲೈನ್ ಮುಖ್ಯ ಪರೀಕ್ಷೆ ಬರುವುದು: ನವೆಂಬರ್, 2025
ಮುಖ್ಯ ಪರೀಕ್ಷೆಯ ಫಲಿತಾಂಶ: ನವೆಂಬರ್, 2025
ಸಂದರ್ಶನ ನಡೆಸುವ ದಿನಾಂಕ: ಡಿಸೆಂಬರ್, 2025 / ಜನವರಿ, 2026
IBPS SO ನೇಮಕಾತಿ 2025ರ ಸಂಪೂರ್ಣ ಅಧಿಸೂಚನೆ PDF ಅನ್ನು ಜುಲೈ 01, 2025 ರಂದು ibps.in ನಲ್ಲಿ ಬಿಡುಗಡೆ ಮಾಡಲಾಗಿದೆ. ಹುದ್ದೆಯ ಸಂಪೂರ್ಣ ವಿವರಗಳು, ಖಾಲಿ ಹುದ್ದೆಯ ವಿಭಾಗವಾರು ವಿವರಗಳು, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಕುರಿತು ಇನ್ನಷ್ಟು ಮಾಹಿತಿ ಪಡೆಯಲು ಅಧಿಕೃತ PDF ಅನ್ನು ಡೌನ್‌ಲೋಡ್ ಮಾಡಿ ಪರಿಶೀಲಿಸಿ.
ಈ ಸುವರ್ಣಾವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ನಿಮ್ಮ ಬ್ಯಾಂಕ್ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಲು, ನಿಗದಿ ಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಮತ್ತು ಪರೀಕ್ಷೆಗೆ ತಯಾರಿ ಪ್ರಾರಂಭಿಸಿ.
Visit Kelasaa.in for the most recent job notifications and updates.
Write A Comment
No Comments