ನಿಮ್ಮ IT ವೃತ್ತಿಗೆ ಶಕ್ತಿ ನೀಡುವ ಮಾರ್ಗ! ಡಿಜಿಟಲ್ ಯುಗದಲ್ಲಿ ಉದ್ಯೋಗಾವಕಾಶ ಹೆಚ್ಚಿಸುವ ಪ್ರಮುಖ SAP ಕೋರ್ಸ್.

post

ನಿಮ್ಮ ವೃತ್ತಿಜೀವನಕ್ಕೆ ಹೊಸ ತಿರುವು! ಡಿಜಿಟಲ್ ಯುಗದಲ್ಲಿ ಉದ್ಯೋಗಾವಕಾಶ ಹೆಚ್ಚಿಸುವ ಪ್ರಮುಖ SAP ಕೋರ್ಸ್.

ಇಂದಿನ ಡಿಜಿಟಲ್ ಯುಗದಲ್ಲಿ SAP (Systems, Applications, and Products) ಕೋರ್ಸ್‌ಗಳು ಉದ್ಯೋಗ ಮತ್ತು ತಾಂತ್ರಿಕ ಜ್ಞಾನದಲ್ಲಿ ಮುಂದುವರಿಯಲು ಹೆಚ್ಚಾಗಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ಇತ್ತೀಚಿಗೆ ಕಲಿಯುತ್ತಿರುವ ಪ್ರಮುಖ ವಿಷಯವೆಂದರೆ ಅದು SAP ಕೋರ್ಸ್ ಆಗಿದೆ. 
SAP ಕೋರ್ಸ್‌ಗಳು ಆಂತರಿಕ ವ್ಯವಸ್ಥೆಯ ನಿರ್ವಹಣೆ ಹೇಗೆ ಮಾಡುವುದು ಎಂಬುದರ  ಪರಿಣತಿ ನೀಡುತ್ತವೆ, ಹಾಗಾಗಿ ಇದನ್ನು ಕಲಿತವರಿಗೆ ಉತ್ತಮ ಉದ್ಯೋಗ ಅವಕಾಶಗಳಿರುತ್ತವೆ.  ಆನ್‌ಲೈನ್‌ ಶಿಕ್ಷಣ ಪ್ಲಾಟ್‌ಫಾರ್ಮ್‌ಗಳಲ್ಲಿ SAP ತರಬೇತಿ ಪಡೆಯಲು Coursera / Udemy / Simplilearn ಸೇರಿದಂತೆ ಹಲವಾರು ಆನ್ಲೈನ್ ವೇದಿಕೆಗಳಿವೆ.  ವಿವಿಧ ಕೋರ್ಸ್‌ಗಳನ್ನು ಕಡಿಮೆ ಬೆಲೆಯಲ್ಲಿ ಒದಗಿಸುತ್ತವೆ.


SAP ಕೋರ್ಸ್ ಅಂದ್ರೆ ಏನು? 

ಪೂರ್ಣ ಮಾಹಿತಿಯನ್ನು ಕನ್ನಡದಲ್ಲಿ ಈ ಲೇಖನದ ಮೂಲಕ ತಿಳಿದುಕೊಳ್ಳಿ, ಇಂದಿನ ತಾಂತ್ರಿಕ ಯುಗದಲ್ಲಿ ಐಟಿ ಕ್ಷೇತ್ರದಲ್ಲಿ ಅವಕಾಶಗಳು ಹೇರಳವಾಗುತ್ತಿವೆ, ಕಂಪನಿಗಳ ಆಂತರಿಕ ವ್ಯವಸ್ಥೆಯನ್ನು ಸುಧಾರಿಸಲು ಅನೇಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಅಂತಹ ಪ್ರಮುಖ ತಂತ್ರಜ್ಞಾನಗಳಲ್ಲಿ ಒಂದಾಗಿ SAP (Systems, Applications & Products in Data Processing) ಜನಪ್ರಿಯವಾಗುತ್ತಿದೆ.

ಇದೊಂದು  ಜರ್ಮನ್ ಮೂಲದ ಸಾಫ್ಟ್‌ವೇರ್ ಕಂಪನಿಯು ಅಭಿವೃದ್ಧಿಪಡಿಸಿದ ಎಂಟರ್ಪ್ರೈಸ್ ರಿಸೋರ್ಸ್ ಪ್ಲಾನಿಂಗ್ (ERP) ಟೂಲ್ ಆಗಿದೆ. ಇದು ಕಂಪನಿಯ ವಿವಿಧ ವಿಭಾಗಗಳನ್ನ ಅಂದರೆ ಹಣಕಾಸು, ಮಾನವ ಸಂಪತ್ತು, ಉತ್ಪಾದನೆ, ಮಾರಾಟ ಮತ್ತು ವಿತರಣೆಗಳನ್ನು ಸಾಫ್ಟ್‌ವೇರ್ ಮೂಲಕ ಹೊಂದಿಸುವ ಕೆಲಸ ಮಾಡುತ್ತದೆ.

SAP ಕೋರ್ಸ್‌ಗಳ ವಿಧಗಳು
SAP ನಲ್ಲಿ ವಿವಿಧ ಕೋರ್ಸ್‌ಗಳು ಲಭ್ಯವಿವೆ, ವಿದ್ಯಾರ್ಥಿಗಳ/ಉದ್ಯೋಗಿಗಳ ಹಿನ್ನಲೆ ಮತ್ತು ಆಸಕ್ತಿಯ ಆಧಾರದ ಮೇಲೆ ಆಯ್ಕೆ ಮಾಡಬಹುದಾಗಿದೆ:

SAP FICO (Finance & Controlling)
ಇದು ನಿಮಗೆ Accounting, Budgeting, Financial Reporting, Cost Control ಈ ರೀತಿಯ ಮುಂತಾದ ಕ್ಷೇತ್ರಗಳಲ್ಲಿ ಬಲವಾದ ಜ್ಞಾನ ನೀಡುತ್ತದೆ. ಹಣಕಾಸು ಮತ್ತು ಲೆಕ್ಕಪತ್ರದ ನಿರ್ವಹಣೆಗೆ ಇದು ಉಪಯುಕ್ತವಾಗಿದೆ.

SAP MM (Material Management)
ಹೆಚ್ಚಾಗಿ ಕಂಪನಿಗಳು ಖರೀದಿ (Procurement), ಸಂಗ್ರಹಣೆ (Inventory) ಮತ್ತು ಸರಬರಾಜು (Logistics) ವ್ಯವಸ್ಥೆಗಾಗಿ SAP MM ಉಪಯೋಗದಲ್ಲಿವೆ. ಈ ಕ್ಷೇತ್ರದಲ್ಲಿ ಅನುಭವಿ ತ್ತು ನಿಪುಣರು ಯಾವಾಗಲೂ ಬೇಡಿಕೆಯಲ್ಲಿರುತ್ತಾರೆ. ಸರಕು ಮತ್ತು ಖರೀದಿಗಳ ನಿರ್ವಹಣೆಗೆ.

SAP SD (Sales & Distribution)
ಈ ಕೋರ್ಸ್ SAP ERP ಸಿಸ್ಟಮ್‌ನ ಪ್ರಮುಖ ಭಾಗವಾಗಿದ್ದು, ಬಿಸಿನೆಸ್‌ನ ಮಾರಾಟ ಮತ್ತು ವಿತರಣಾ ಚಟುವಟಿಕೆಗಳನ್ನು ನಿರ್ವಹಣೆ ಮಾಡಲು ಬಳಸಲಾಗುತ್ತದೆ. ಇದು ಕಂಪನಿಗಳ Sales Process, Shipping, Order Management, Billing ಮುಂತಾದ ಮಾರಾಟ ಮತ್ತು ವಿತರಣಾ ಚಟುವಟಿಕೆಗಳಿಗೆ ಸಹಾಯಕವಾಗುತ್ತದೆ.

SAP HCM (Human Capital Management)
HR background ಇರುವಂತಹ ಅಥವಾ HR ಉದ್ಯೋಗದಲ್ಲಿ ಆಸಕ್ತಿ ಇರುವವರಿಗೆ ಇದು ಅತ್ಯುತ್ತಮ SAP ಮೊಡ್ಯೂಲ್ ಆಗಿದೆ, ಅಲ್ಲದೆ ಇದು ಉದ್ಯೋಗಿಗಳ ನಿರ್ವಹಣೆಗೆ ಸೂಕ್ತವಾಗಿದೆ.

SAP ABAP (Advanced Business Application Programming)
ಎಲ್ಲಾ SAP implementation ಹಾಗೂ support ಪ್ರಾಜೆಕ್ಟ್ ಗಳಲ್ಲಿ ABAP developers ಅಗತ್ಯವಿರುತ್ತಾರೆ.  ಡೆವಲಪರ್‌ಗಾಗಿ,  SAP ಪ್ರೋಗ್ರಾಮಿಂಗ್ ಭಾಷೆಯಾಗಿರುತ್ತದೆ.

SAP BASIS
ಇದು SAP ಸಿಸ್ಟಮ್‌ಗಳ ಹಿಂದಿನ ತಾಂತ್ರಿಕ ಮೂಲವಾಗಿರುತ್ತದೆ.  ಅಲ್ಲದೆ ಇದು ಸರ್ವರ್ ನಿರ್ವಹಣೆ, ಸಿಸ್ಟಮ್ ಇನ್‌ಸ್ಟಾಲೇಶನ್, ಯೂಸರ್ ಅಕ್ಸೆಸ್ ಕಂಟ್ರೋಲ್, ಡೇಟಾಬೇಸ್ ನಿರ್ವಹಣೆ, ಹಾಗೂ ಸಿಸ್ಟಮ್ ಸೆಕ್ಯುರಿಟಿಯನ್ನು  ಒಳಗೊಂಡಿದ್ದು, ಸರಳವಾಗಿ ಹೇಳಬೇಕಾದರೆ, ಸಿಸ್ಟಮ್ ಆಡಳಿತಕ್ಕಾಗಿ ಇರುವಂತಹ ಒಂದು ಕ್ಷೇತ್ರವಾಗಿದೆ.

 

ಯಾರು ಈ ಕೋರ್ಸ್‌ಗಳನ್ನು ಕಲಿಯಬೇಕು?
 

ಬಿ.ಕಾಂ, ಎಂ.ಬಿ.ಎ., ಬಿ.ಇ., ಎಂ.ಟೆಕ್ ಮುಂತಾದ ಹಿನ್ನಲೆಯ ವಿದ್ಯಾರ್ಥಿಗಳು ಮತ್ತು ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಒಳ್ಳೆಯ ಅವಕಾಶಗಳು ಮತ್ತು ಉತ್ತಮ ಭವಿಷ್ಯ ಹೊಂದಲು ಸಹಕಾರಿಯಾಗಿದೆ. 
ಅಲ್ಲದೆ ಐಟಿ ಕ್ಷೇತ್ರದಲ್ಲಿ ಕರಿಯರ್ ಮಾಡಲು ಆಸಕ್ತಿ ಇರುವವರು ಮತ್ತು ಈಗಾಗಲೇ ಉದ್ಯೋಗದಲ್ಲಿರುವವರು ತಮ್ಮ ಕೌಶಲ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಈ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಾರೆ.

 

SAP ಕಲಿಯುವುದರಿಂದ ಆಗುವಂತಹ ಲಾಭಗಳೇನು?
 

  • ವೈಶಿಷ್ಟ್ಯಪೂರ್ಣ ತಂತ್ರಜ್ಞಾನ ಜ್ಞಾನ
     
  • ಜಗತ್ತಿನಾದ್ಯಾಂತ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ಅದ್ಭುತ  ಅವಕಾಶ
     
  • ಕೆಲಸದ ಅವಕಾಶ ಹೆಚ್ಚಾಗುವುದು
     
  • ಉತ್ತಮ ಸಂಬಳದ ಸಾಧ್ಯತೆ 
     
  • ಹಲವಾರು ವಿಭಾಗಗಳಲ್ಲಿ ಅವಕಾಶ 
     
  • ಹೆಚ್ಚು ಬೇಡಿಕೆ ಇರುವಂತಹ ವೇದಿಕೆಯಾಗಿದೆ

 


Share This Job:

Write A Comment

    No Comments