ಬಿಎ ಪದವಿ ಮಾಡಿದರೆ ಏನು ಲಾಭ? Jobs in Bengaluru!

ಬಿಎ ಪದವಿಯು ಕೇವಲ ಕೌಶಲ್ಯಗಳು, ಶೈಕ್ಷಣಿಕವಾಗಿ ಮಾತ್ರವಲ್ಲದೆ, ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಅಡಿಪಾಯ ಹಾಕುತ್ತವೆ.
ಬಿಎ ಪದವಿಯಿಂದ ಏನು ಉಪಯೋಗ? ಎಂಬುದು ಅನೇಕರ ಮನಸ್ಸಿನಲ್ಲಿರುವ ಸಾಮಾನ್ಯ ಪ್ರಶ್ನೆ, ಕೆಲವು ಪಾಲಕರು ಅಥವಾ ಕೆಲವು ಜನ ಹೇಳ್ತಾರೆ ಬಿಎ ಮಾಡಬೇಡ ಅದರಿಂದ ಏನು ಉಪಯೋಗ ಇಲ್ಲ, ಮುಂದೆ ಭವಿಷ್ಯ ಅಷ್ಟು ಚೆನಾಗಿರಲ್ಲ ಅಂತ, ಆದರೆ ಬಿಎ ಪದವಿಗೆ ಎಷ್ಟು ಬೆಲೆ ಇದೆ ಎನ್ನುವುದನ್ನ ಅವರು ಆಳವಾಗಿ ತಿಳಿದುಕೊಂಡಿಲ್ಲ.
ಬಿಎ ಪದವಿಯು ಕಲೆ ಮತ್ತು ಮಾನವಿಕ ವಿಷಯಗಳಲ್ಲಿ (Arts and Humanities) ನೀಡಲಾಗುವ ಒಂದು ಸ್ನಾತಕ ಪದವಿಯಾಗಿರುತ್ತದೆ. ಇದು ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಜ್ಞಾನ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಬೆಳೆಸಲು ಅನುಕೂಲ ಮಾಡಿಕೊಡುತ್ತದೆ. ಇತಿಹಾಸ, ರಾಜಕೀಯ ವಿಜ್ಞಾನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನಃಶಾಸ್ತ್ರ, ಕನ್ನಡ, ಇಂಗ್ಲಿಷ್, ಸಾಹಿತ್ಯ, ತತ್ವಶಾಸ್ತ್ರ ಇತ್ಯಾದಿ ವಿಷಯಗಳಲ್ಲಿ ನಿಮ್ಮ ಆಸಕ್ತಿಗೆ ಅನುಗುಣವಾಗಿ ಪ್ರಮುಖ ವಿಷಯಗಳನ್ನು (majors) ಈ ಬಿಎ ಪದವಿಯಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಹಾಗೆ ಇದರಿಂದ ಮುಂದೆ ಹಲವಾರು ಉದ್ಯೋಗಾವಕಾಶಗಳು ಕೂಡ ಸಾಲುಗಟ್ಟಿ ನಿಂತಿವೆ.
ಹಾಗಿದ್ದಲ್ಲಿ ಬಿಎ ಪದವಿ ಪಡೆದುಕೊಂಡರೆ ಏನು ಪ್ರಯೋಜನ?
ಬಿಎ ಪದವಿಯು ವಿವಿಧ ಕ್ಷೇತ್ರಗಳ ಮೂಲಕ ಜ್ಞಾನವನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
ವಿಮರ್ಶಾತ್ಮಕ ಚಿಂತನೆ, ಸಮಸ್ಯೆ-ಪರಿಹಾರ, ಮತ್ತು ಲಾಜಿಕಲ್ ವಿಶ್ಲೇಷಣಾ ಕೌಶಲ್ಯಗಳನ್ನು ಹೆಚ್ಚಿಸೋದಿಕ್ಕೆ ಸಹಾಯ ಮಾಡುತ್ತದೆ.
ವಿಶೇಷವಾಗಿ ಬರವಣಿಗೆ, ಮೌಖಿಕ ಸಂವಹನ ಮತ್ತು ನಿರೂಪಣಾ ಕೌಶಲ್ಯಗಳನ್ನು ಸುಧಾರಿಸಲು ಅನೂಕೂಲ ಮಾಡುತ್ತದೆ.
ಮಾಹಿತಿ ಸಂಗ್ರಹಣೆ ಮತ್ತು ಸಂಶೋಧನಾ ವರದಿಗಳನ್ನು ಸಿದ್ಧಪಡಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ. ಇವೆಲ್ಲ ಕೌಶಲ್ಯಗಳು ಸರ್ಕಾರೀ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಂದ್ರೆ UPSC, KPSC ಮುಂತಾದ ಸರ್ಕಾರಿ ಉದ್ಯೋಗಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಅಗತ್ಯವಾದ ಸಾಮಾನ್ಯ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುತ್ತವೆ.
ಹಾಗಾದರೆ ಬಿಎ ಪದವಿಯ ನಂತರ ಯಾವ ವೃತ್ತಿ ಅವಕಾಶಗಳು ನಮಗೆ ದೊರಕುತ್ತವೆ?
ಬಿಎ ಪದವಿ ಮಾಡಿದ ನಂತರ ಹಲವಾರು ವೃತ್ತಿ ಆಯ್ಕೆಗಳಿವೆ. ನೀವು ಆಯ್ಕೆ ಮಾಡಿದ ವಿಷಯಗಳು ಮತ್ತು ಆಸಕ್ತಿಗಳ ಆಧಾರದ ಮೇಲೆ ಈ ಅವಕಾಶಗಳು ಬದಲಾಗುತ್ತ ಹೋಗುತ್ತವೆ. ಉನ್ನತ ಶಿಕ್ಷಣದ ಆಧ್ರದ ಮೇಲೆ ಅಂದರೆ ನೀವೇನಾದರೂ ಎಂ.ಎ (Master of Arts) ಮಾಡಿದರೆ ಒಂದು ನಿರ್ಧಿಷ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಿಕೊಂಡರೆ (ಉದಾಹರಣೆಗೆ: ಇತಿಹಾಸದಲ್ಲಿ MA, ಕನ್ನಡ ಸಾಹಿತ್ಯದಲ್ಲಿ MA, ಇತ್ಯಾದಿ). ಇದು ಶಿಕ್ಷಕ ವೃತ್ತಿಗೆ ಅಥವಾ ಆಳವಾದ ಸಂಶೋಧನೆಗೆ ಅತ್ಯುತ್ತಮ ಆಯ್ಕೆಯಾಗಿದೆ.
ಅನೇಕ ಬಿಎ ಪದವಿ ತೆಗೆದುಕೊಂಡವರು ಎಂಬಿಎ ವ್ಯಾಸಂಗ ಮಾಡಿ ಕಾರ್ಪೊರೇಟ್ ವಲಯದಲ್ಲಿ ಹಲವಾರು ಹುದ್ದೆಗಳನ್ನು ಪಡೆದುಕೊಳ್ಳುತ್ತಾರೆ.
ಅಷ್ಟೇ ಅಲ್ಲದೆ ಕಾನೂನು ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ, ಬಿಎ ನಂತರ ಎಲ್‌ಎಲ್‌ಬಿ ಕೂಡ ಮಾಡಬಹುದು ಮತ್ತು ವಕೀಲರಾಗಿ, ನ್ಯಾಯಾಧೀಶರಾಗಿ ಅಥವಾ ಕಾನೂನು ಸಲಹೆಗಾರರಾಗಿ ಕೆಲಸ ಮಾಡಬಹುದು.
ಶಿಕ್ಷಕರಾಗಲು ಇಷ್ಟಪಡುವನಂತಹ ವಿದ್ಯಾರ್ಥಿಗಳು ಬಿಎ ನಂತರ ಬಿ.ಎಡ್ (B.Ed) ಮಾಡಬಹುದು ಶಿಕ್ಷಕ ವೃತ್ತಿಯಲ್ಲೂ ಕೂಡ ಅಪಾರ ಉದ್ಯೋಗಾವಕಾಶಗಳಿವೆ.
ಬಿಎ ಪದವಿ ಮಾಡಿದ ನಂತರ ಅನಿಮೇಷನ್, ಇಂಟೀರಿಯರ್ ಡಿಸೈನಿಂಗ್, ಟಿವಿ ಮಾಧ್ಯಮಗಳಲ್ಲಿ, ಮಾರ್ಕೆಟಿಂಗ್, ಹೋಟೆಲ್ ಮ್ಯಾನೇಜ್‌ಮೆಂಟ್, ಫ್ಯಾಷನ್ ಡಿಸೈನಿಂಗ್, ಮುಂತಾದ ಕ್ಷೇತ್ರಗಳಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಿಕೊಳ್ಳಬಹುದಾಗಿದೆ.
Use this link for job information in Bangalore. Kelasaa.in
ಬಿಎ ಪದವಿ ಪೂರೈಸಿದ ನಂತರ ವಿದ್ಯಾರ್ಥಿಗಳಿಗೆ ಹಲವು ಸರ್ಕಾರಿ ವಲಯಗಳಲ್ಲಿ ಉತ್ತಮ ವೃತ್ತಿ ದಾರಿಗಳಿವೆ. ಸರ್ಕಾರಿ ವಲಯದಲ್ಲಿ, ಯುಪಿಎಸ್‌ಸಿ (UPSC) ನಡೆಸುವ ನಾಗರಿಕ ಸೇವಾ ಪರೀಕ್ಷೆಗಳು, ಕೆಪಿಎಸ್‌ಸಿ (KPSC) ಪರೀಕ್ಷೆಗಳು, ಹಾಗೆಯೇ ಬ್ಯಾಂಕಿಂಗ್, ರೈಲ್ವೆ, ಪೊಲೀಸ್ ಇಲಾಖೆ ಮತ್ತು ಅಂಚೆ ಇಲಾಖೆಗಳಲ್ಲಿನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಿಎ ಪದವಿ ಉತ್ತಮ ಬುನಾದಿಯನ್ನು ಒದಗಿಸುತ್ತದೆ. ಜೊತೆಗೆ ಬ್ಯಾಂಕುಗಳಲ್ಲಿ ಅಧಿಕಾರಿ ಮಟ್ಟದ ಹುದ್ದೆಗಳೂ ಲಭ್ಯವಿವೆ.
ಹಾಗಾದರೆ ಬಿಎ ಪದವಿಯಲ್ಲಿ ಯಾವ ವಿಷಯಗಳು ಜನಪ್ರಿಯ ಸಂಯೋಜನೆಗಳಾಗಿವೆ? (Combinations):
ಬಿಎ ಪದವಿಯಲ್ಲಿ ಅನೇಕ ವಿಷಯಗಳನ್ನ ನಾವು ಅಧ್ಯಯನ ಮಾಡಲು ಅವಕಾಶಗಳಿವೆ.
- ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ
- ಇಂಗ್ಲಿಷ್ ಸಾಹಿತ್ಯ, ಕನ್ನಡ ಸಾಹಿತ್ಯ, ಪತ್ರಿಕೋದ್ಯಮ
- ಮನಃಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ
- ಕನ್ನಡ, ಇತಿಹಾಸ, ಸಮಾಜಶಾಸ್ತ್ರ
- ಅರ್ಥಶಾಸ್ತ್ರ, ಗಣಿತ, ಸಂಖ್ಯಾಶಾಸ್ತ್ರ (ಈ ಸಂಯೋಜನೆ ತಾರ್ಕಿಕ ಹುದ್ದೆಗಳಿಗೆ ಅನುಕೂಲವಾಗಿದೆ)
ಒಟ್ಟಾರೆ, ಬಿಎ ಪದವಿಯು ವಿಶಾಲವಾದ ಶೈಕ್ಷಣಿಕ ಮತ್ತು ವೃತ್ತಿಪರ ಅವಕಾಶ ಸಾಗರ ನಾವುಗಳು ಅದನ್ನ ಅರ್ಥೈಸಿಕೊಂಡು ಸರಿಯಾದ ಹೆಜ್ಜೆ ಇಡಬೇಕು. ನಿಮ್ಮ ಆಸಕ್ತಿ, ಕೌಶಲ್ಯ ಮತ್ತು ಗುರಿಗಳಿಗೆ ಸರಿಯಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಉನ್ನತ ಮಟ್ಟದ ವ್ಯಾಸಂಗ ಅಥವಾ ವೃತ್ತಿ ಕೌಶಲ್ಯಗಳನ್ನು ಪಡೆದುಕೊಳ್ಳುವುದು ಇಲ್ಲಿ ತುಂಬಾ ಮುಖ್ಯವಾಗಿದೆ.
ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ ಈ ವೆಬ್ ಸೈಟ್ ಮೂಲಕ ಹೋಗಿ..Kelasaa.in
Write A Comment
No Comments